ಕವಿತಾ ಷಾ (೬ ನವೆಂಬರ್ ೧೯೬೮) ರವರು ಎನ್ವಿರಾನ್ಮೆಂಟಲ್‌ ಅಂಡ್‌ ಸಸ್ಟೈನೇಬಲ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ , ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಪರಿಸರ ಜೈವಿಕ ತಂತ್ರಜ್ಞರಾಗಿದ್ದಾರೆ . ಅವರು ಆರು ನಿರ್ದೇಶಕರಲ್ಲಿ ಒಬ್ಬರಾಗಿದ್ದು , ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಮಹಿಳಾ ನಿರ್ದೇಶಕರಾಗಿದ್ದಾರೆ(ಬಿಎಚ್ಯು). ಅವರು ಪರಿಸರೀಯ ಜೈವಿಕ ತಂತ್ರಜ್ಞಾನ , ಆರೋಗ್ಯ ಮತ್ತು ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ ತಮ್ಮ ಪಾತ್ರಕ್ಕೆ ಗಮನಾರ್ಹರಾಗಿದ್ದಾರೆ ಹಾಗೂ ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ ಆಧಾರಿತ ಸಂವೇದಕದ ರಚನೆ ಮತ್ತು ಬಯೋ ಸೆನ್ಸಾರ್ , ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದಕ್ಕಾಗಿ ಪ್ರಸಿದ್ಧಿ ಪಡೆದರು. = ಜನನ = ಕವಿತಾರವರು ಭಾರತದ ವಾರಣಾಸಿಯಲ್ಲಿ ನವೆಂಬರ್ ೬, ೧೯೬೮ ರಂದು ಜನಿಸಿದರು. = ವೈಯಕ್ತಿಕ ಜೀವನ = ಕವಿತಾ ರವರ ತಂದೆ - ರಾಯ್ ಸುಶೀಲ್ ಕುಮಾರ್, ತಾಯಿ - ಶುಭಾ ಅಗರ್ವಾಲ್ . ಕವಿತಾ ರವರು ಮುಕುಲ್ ಕುಮಾರ್ ಷಾ ರವರನ್ನು ಜನವರಿ ೨೫ , ೧೯೯೧ ರಂದು ವಿವಾಹವಾದರು. = ಶಿಕ್ಷಣ = ಬ್ಯಾಚುಲರ್ ಆಫ್ ಸೈನ್ಸ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೮೯. ಮಾಸ್ಟರ್ ಆಫ್ ಸೈನ್ಸ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ೧೯೯೧. ಬ್ಯಾಚುಲರ್ ಆಫ್ ಎಜುಕೇಷನ್ , ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ ,೧೯೯೨. ಡಾಕ್ಟರ್ ಆಫ್ ಫಿಲಾಸಫಿ , ಬನಾರಸ್ ಹಿಂದೂ ವಿಶ್ವವಿದ್ಯಾಲಯ , ವಾರಣಾಸಿ, ೧೯೯೫. = ವೃತ್ತಿಜೀವನ = ಜೂನಿಯರ್ ಸಂಶೋಧನಾ ಸಹವರ್ತಿ ಜೀವರಸಾಯನಶಾಸ್ತ್ರ, ಬನಾರಸ್ ಹಿಂದೂ ಯುನಿವರ್ಸಿಟಿ, ೧೯೯೩-೧೯೯೫. ಸೀನಿಯರ್ ರಿಸರ್ಚ್ ಫೆಲೋ , ಬನಾರಸ್ ಹಿಂದೂ ಯುನಿವರ್ಸಿಟಿ, ೧೯೯೫-೧೯೯೬. ೧೯೯೬ ರಿಂದ ಸಂಶೋಧನಾ ಸಹಾಯಕಿ , ಬನಾರಸ್ ಹಿಂದೂ ಯುನಿವರ್ಸಿಟಿ. ೧೯೯೮ ರಿಂದ ಪೋಸ್ಟ್ ಡಾಕ್ಟೋರಲ್ ಸಂಶೋಧನಾ ಸಹವರ್ತಿ , ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್ , ಟೋಕಿಯೋ . ಪರಿಸರ ಸಲಹೆಗಾರರ ಸಚಿವಾಲಯ, ಭಾರತ. = ಸದಸ್ಯತ್ವ = ೧೯೮೪-೧೯೮೮ ತನಕ ಭಾರತೀಯ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್ ನೊಂದಿಗೆ ಸೇವೆ ಸಲ್ಲಿಸಿದರು. ಸದಸ್ಯೆ - ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೋಸಿಯೇಷನ್ (ಜೀವನ). ಜೈವಿಕ ರಸಾಯನಶಾಸ್ತ್ರಜ್ಞರ ಸೊಸೈಟಿ. = ಪ್ರಶಸ್ತಿಗಳು = ವಿಮೆನ್ ಸೈಂಟಿಸ್ಟ್ ಅವಾರ್ಡ್ -೨೦೧೧ , ಬಯೋಟೆಕ್ ರಿಸರ್ಚ್ ಸೊಸೈಟಿ . = ಸಾಧನೆಗಳು = ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ - ಆಧಾರಿತ ಸಂವೇದಕದ ರಚನೆ. ಬಯೋ ಸೆನ್ಸಾರ್ ಮತ್ತು ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದರು. = ಉಲ್ಲೇಖಗಳು =